ಇಂದು ಇಂಡಿ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಕಡೆ ವಿದ್ಯುತ್ ವ್ಯತ್ಯಯ..!
ಇಂಡಿ : ಡಿ 23 ರಂದು ಮುಂಜಾನೆ 09.00 ಘಂಟೆಯಿಂದ ಸಾಯಂಕಾಲ 05.00 ಘಂಟೆಯವರೆಗೆ 220ಕೆವಿ ನಂದಿಹಾಳ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತು ಕಾಮಗಾರಿ ಹಾಗೂ ತ್ರೈಮಾಸಿಕ ನಿರ್ವಹಣೆ ಕೆಲಸಗಳನ್ನು ಕೈಗೊಳ್ಳುವ ಪ್ರಯುಕ್ತ 220ಕೆ ನಂದಿಹಾಳ ಮಾರ್ಗಗಳ ಮೇಲೆ ಬರುವ 220ಕೆವಿ ಬಸವನ ಬಾಗೇವಾಡಿ ಮಾರ್ಗ-2, ಹಾಗೂ 220ಕೆವಿ ವಿಜಯಪುರ ಮಾರ್ಗ-1 & 2 ಹಾಗೂ 220ಕೆವಿ ವಿಜಯಪುರ ಉಪ-ಕೇಂದ್ರದ ಮೇಲೆ ಬರುವ 110ಕೆ.ವಿ ಉಪ-ಕೇಂದ್ರಗಳಾದ ವಿಜಯಪುರ ನಗರ, ಭೂತನಾಳ, ಕೆ.ಐ.ಎ.ಡಿ.ಬಿ ವಿಜಯಪುರ, ಜುಮನಾಳ, 33ಕೆ.ವಿ ಉಪ-ಕೇಂದ್ರಗಳಾದ ತಿಡಗುಂದಿ, ನಾಗಠಾಣ, ಹೊನ್ನುಟಗಿ, 33ಕೆವಿ ಅರಕೇರಿ ಎಲ್.ಐ.ಎಸ್ ಮಾರ್ಗ, 220ಕೆ.ವಿ ವಿದ್ಯುತ್ ಕೇಂದ್ರ ಇಂಡಿ ಮೇಲೆ ಬರುವ 110ಕೆ.ವಿ ಉಪ-ಕೇಂದ್ರಗಳಾದ ಇಂಡಿ, ಝಳಕಿ, ಹಿರೆಮಸಳಿ, ಇಂಚಗೇರಿ, ಜಿಗಜಿವಣಗಿ, ಕೆರೂರ, ಚಡಚಣ, ರೊಡಗಿ, ಧೂಳಖೇಡ, 33 ಕೆವಿ ಉಪ-ಕೇಂದ್ರಗಳಾದ ನಾದ ಬಿಕೆ, ತಾಂಬಾ, ತಡವಲಗಾ, ಹಲಸಂಗಿ, ನೀವರಗಿ, ಹೋರ್ತಿ, ಬಿಎಸ್ಎಸ್ಕೆ ಸಕ್ಕರೆ ಕಾರ್ಖಾನೆ ಮರಗೂರ. 220ಕೆ.ವಿ ವಿದ್ಯುತ್ ಕೇಂದ್ರ ಆಹೇರಿ ಮೇಲೆ ಬರುವ 110ಕೆ.ವಿ ಉಪ-ಕೇಂದ್ರಗಳಾದ ಸಿಂದಗಿ, ಮಲಘಾಣ(ಸಿಂದಗಿ). 33ಕೆ.ವಿ ಉಪ-ಕೇಂದ್ರಗಳಾದ ಗೋಲಗೇರಿ, ಕಲಕೇರಿ, ವಿದ್ಯುತ್ ಕೇಂದ್ರಗಳಿಂದ ಸರಬರಾಜು ಆಗುವ ನಗರ/ಗ್ರಾಮೀಣ/ನೀರಾವರಿ ಪಂಪಸೆಟ್/ಕುಡಿಯುವ ನೀರಾವರಿ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗುತ್ತದೆ. ಕಾರಣ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಹಕರು ಸಹಕರಿಸಬೇಕೆಂದು ಅಧೀಕ್ಷಕ ಅಭಿಯಂತರರು (ವಿ) ಕಾರ್ಯ ಮತ್ತು ಪಾಲನೆ ವೃತ್ತ ಹುವಿಸಕಂನಿ ವಿಜಯಪೂರ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.