ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ
ಹನೂರು: ಪಟ್ಟಣದ ಕ್ರಿಸ್ತರಾಜ ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ ಹಮ್ಮಿ ಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಣ್ಯರುಗಳು ಉದ್ಘಾಟಿಸಿದರು.
ಮೈಸೂರಿನ ಎಂಡಿಇಎಸ್ ಕಾರ್ಯದರ್ಶಿ ಫಾ. ಎಡ್ವರ್ಡ್ ವಿಲಿಯಂ ಸಲ್ದಾನ ಮಾತನಾಡಿ, ಇತ್ತೀಚೆಗೆ ಯುವಪೀಳಿಗೆ ಶಿಕ್ಷಣ ಮತ್ತು ಸಾಕ್ಷರತೆ ಎರಡರ ವ್ಯತ್ಯಾಸ ತಿಳಿಯಬೇಕು. ಶಿಕ್ಷಣದ ಜೊತೆಗೆ ಕಡೆಗೂ ಹೆಚ್ಚಿನ ಹೊತ್ತನ್ನು ನೀಡಬೇಕು.ಒಳ್ಳೆಯ ಶಿಕ್ಷಣ ಪಡೆದು ತಂದೆ ತಾಯಿಗೆ, ಗ್ರಾಮಕ್ಕೆ, ಓದಿದ ಶಾಲೆಗೆ ಕೀರ್ತಿ ತರುವುದರ ಜೊತೆಗೆ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಯ ಯುವ ಸಮೂಹವು ಮೊಬೈಲ್ ಬಳಕೆಗೆ ಹೆಚ್ಚು ಒತ್ತು ನೀಡಿ ಸಾಮಾಜಿಕ ಜಾಲ ತಾಣಗಳಲ್ಲಿ ಮುಳುಗಿರುತ್ತದೆ. ಇದರಿಂದ ಶಿಕ್ಷಣ ಕುಂಠಿತವಾಗಿದೆ. ಚಿಕ್ಕ ಮಕ್ಕಳು ಅತಿಯಾದ ಮೊಬೈಲ್ ಬಳಕೆ ಮಾಡುವುದರಿಂದ ಕಣ್ಣಿನ ದೋಷ ಸಹ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ನೀಡುವುದನ್ನು ಕಡಿಮೆ ಮಾಡಬೇಕು ಎಂದರು.ಮಕ್ಕಳು ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿತಾಗ ಮಾತ್ರ ಶಿಕ್ಷಣಕ್ಕೆ ಒಂದು ಮೌಲ್ಯ ಬರುತ್ತದೆ ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ 2023,24 ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಕ್ರಿಸ್ತರಾಜ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮವು ನೋಡುಗರ ಮನಸೂರೆಗೊಳ್ಳುವಂತಿತ್ತು.
ಈ ಸಂದರ್ಭದಲ್ಲಿ ಎಂಡಿಇಎಸ್ ಅಧ್ಯಕ್ಷ ಡಾ.ಬರ್ನಾರ್ಡ್ ಮೋರಸ್, ಖಜಾಂಚಿ ಫಾ.ನವೀನ್ ಕುಮಾರ್, ಕ್ರಿಸ್ತರಾಜ ಸಂಸ್ಥೆಯ ವ್ಯವಸ್ಥಾಪಕ ಫಾ.ರೋಷನ್, ತಹಸಿಲ್ದಾರ್ ಗುರುಪ್ರಸಾದ್, ಬಿಇಒಗುರುಲಿಂಗಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಲ್ತಾಜ್ ಬಾನು, ಉಪಾಧ್ಯಕ್ಷ ಆನಂದ್, ಸದಸ್ಯರಾದ ಗಿರೀಶ್, ಹರೀಶ್, ಶಿಕ್ಷಕರು, ಉಪನ್ಯಾಸಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.