ಕನ್ನಡ ಸಾಹಿತ್ಯಕ್ಕೆ ಕಲ್ಯಾಣ ಕರ್ನಾಟಕದ ಕೊಡುಗೆ ಅಪಾರ : ಪ್ರವೀಣ ಮುಚ್ಚಟ್ಟಿ
ಕಮಲಾಪುರ : ಕನ್ನಡ ಸಾಹಿತ್ಯಕ್ಕೆ ಕಲ್ಯಾಣ ಕರ್ನಾಟಕದ ಕೊಡುಗೆ ಅಪಾರವಾಗಿದೆ ಮೊಟ್ಟಮೊದಲ ಕೃತಿ ಕವಿರಾಜಮಾರ್ಗ ಸಾಮಾಜಿಕ ನ್ಯಾಯ ಹಾಗೂ ವಾಸ್ತವಿಕತೆ ನೆಲೆಗಟ್ಟಿನ ಮೇಲೆ ರಚಿತವಾದ ಅಂತಹ ವಚನ ಸಾಹಿತ್ಯ ಮತ್ತಿತರ ಮಹತ್ತರ ಕೊಡುಗೆ ನೀಡಿದ್ದು ನಮ್ಮ ನೆಲದ ಹಿರಿಮೆಯಾಗಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆ ಕನ್ನಡ, , ಅನ್ಯ ಭಾಷೆಗಳ ಹಾವಳಿಯಿಂದ ಇಂದು ಕನ್ನಡಕ್ಕೆ ಕುಂದ ಕುಂದು ಉಂಟಾಗುತ್ತಿದೆ ಆದ್ದರಿಂದ ಕನ್ನಡ ಭಾಷೆ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಶ್ರಮಿಸೋಣ ಎಂದು ಮಾಜಿ ತಾಲೂಕು ಪಂಚಾಯಿತಿಯ ಸದಸ್ಯ ಹಾಗೂ ಪ್ರಸ್ತುತ ಕಲ್ಬುರ್ಗಿ ಗ್ರಾಮೀಣ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರವೀಣ ಮುಚ್ಚೆಟ್ಟಿ ಹೇಳಿದರು.
ಕಮಲಾಪುರ ತಾಲೂಕಿನ ಸೋಂತ್ ಗ್ರಾಮದ ಶ್ರೀ ಬಸವ ಗುರುಕುಲ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಲಯ ಘಟಕ ಸೊಂತ ವತಿಯಿಂದ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ವಿಶೇಷ ಅಭಿಯಾನದಡಿ
*ಮಕ್ಕಳ ಸಾಹಿತ್ಯ ಸಂಭ್ರಮ ಉಪನ್ಯಾಸ ಹಾಗೂ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ತಾಯಿಯ ಎದೆಹಾಲು ಕುಡಿತ ಕಲಿತಿರುವ ಭಾಷೆ ಕನ್ನಡ, ಕನ್ನಡಕ್ಕಾಗಿ ಕೈಯೆತ್ತಿದರೆ ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಕವಿ ಒಬ್ಬರು ಹೇಳಿದ್ದಾರೆ, ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಬಿಂಬಿಸುವ ಭಾಷೆ ಕನ್ನಡ, ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಮೀಣ ಮಟ್ಟಕ್ಕೂ ಬಂದು ಕನ್ನಡ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ.
ಮಕ್ಕಳ ಸಾಹಿತ್ಯ ಸಂಭ್ರಮದ ಕುರಿತು ಉಪನ್ಯಾಸ ನೀಡಿದ ಸಾಹಿತಿ, ಶಿಕ್ಷಕಿ ಕಸ್ತೂರಿಬಾಯಿ ರಾಜೇಶ್ವರ್ ಮಾತನಾಡಿ ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಸಾಹಿತ್ಯ ಕಥೆ ಕವನ ಪ್ರಬಂಧ ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕು, ನಮ್ಮ ಮನಸ್ಸಿನ ಭಾವನೆಗಳನ್ನು ಜೀವನದಲ್ಲಿನ ಅನುಭವಗಳನ್ನು ಘಟನೆಗಳನ್ನು ಲಿಖಿತ ರೂಪದಲ್ಲಿ ಹೊರಹಾಕುವ ಮೂಲಕ ಸಾಹಿತ್ಯ ಸಾಹಿತ್ಯ ರಚನೆಗೆ ಮುಂದಾಗಬೇಕು
ಇನ್ಫೋಸಿಸ್ ನ ಸಂಸ್ಥಾಪಕ ಎನ್ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ ಸಮಾಜ ಸೇವಕಿ ಸುಧಾ ಮೂರ್ತಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಜಗತ್ತಿನ ಶಕ್ತಿಶಾಲಿ ಸಂಸ್ಥೆ ಕಟ್ಟಿದ್ದಾರೆ, ಕನ್ನಡ ಮಾಧ್ಯಮದ ಕುರಿತು ಕೀಳರಿಮೆಯನ್ನು ಬಿಟ್ಟು ಉನ್ನತ ಸಾಧನೆಯತ್ತ ಮುಖ ಮಾಡಬೇಕು, ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಮಟ್ಟಕ್ಕೂ ಆಗಮಿಸಿ ತಮ್ಮಲ್ಲಿ ಕನ್ನಡ ಕುರಿತು ಜಾಗೃತಿ ಮೂಡಿಸುವ ಮೂಲಕ ಕನ್ನಡದ ಅಭಿಮಾನವನ್ನು ಹೆಚ್ಚಿಸುತ್ತಿದೆ, ಕರ್ನಾಟಕದಲ್ಲಿ ಐಎಎಸ್ ಐಪಿಎಸ್ ಪಾಸಾದವರ ಪೈಕಿ ಶೇಕಡ 50ರಷ್ಟು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು ಎಂಬ ಹೆಮ್ಮೆ ನಮಗಿದೆ ಎಂದರು
ಪ್ರಮುಖರಿಗೆ ವಿಶೇಷ ಸತ್ಕಾರ
ರವಿಕಾಂತ ಕೋರಿ ಸೊಂತ., ರಾಘವೇಂದ್ರ ಗಾದಾ, ನವರಂಗ್ ಜಾದವ್, ಉದಯಕುಮಾರ ಸಿರಂಜಿ ವಿವಿಧ ಕ್ಷೇತ್ರದ ಪ್ರಮುಖರಿಗೆ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷ
ಸುರೇಶ ಲೇಂಗಟಿ, ಕಸಾಪ ವಲಯ ಘಟಕ ಅಧ್ಯಕ್ಷ ಅನಂತಕುಮಾರ ಪಾಟೀಲ್, ಕಸಾಪ ತಾಲೂಕು ಘಟಕದ ಪ್ರತಿನಿಧಿ ಸಂಜಯ ನಾಟೀಕಾರ, ಸೊಂತ ಪಿಕೆಪಿಎಸ್ ಉಪಾಧ್ಯಕ್ಷ ಅಹ್ಮದ್ ಪಟೇಲ್, ಮಶಾಕ ಹೆರೂರ,
ಶಿವಕುಮಾರ ಕಾಬಾ, ಅಜೀಂ, ಸುವರ್ಣಾ, ಸತೀಶ್, ತನುಜಾ ಇತರರು ಇದ್ದರು.
ಅಂಬರೀಷ್ ಮೆತ್ರೆ ಸ್ವಾಗತಿಸಿದರು, ಜ್ಯೋತಿ ಮೂಲಗೆ ನಿರೂಪಿಸಿದರು.