ಇಂಡಿ | ಆಳೂರ ಗ್ರಾಮದಲ್ಲಿ ಮನೆ ಬಾಗಿಲು ಒಡೆದು 3 ಲಕ್ಷ ನಗದು 4 ತೊಲೆ ಬಂಗಾರ ಕಳ್ಳತನ..!
ಇಂಡಿ : ಮನೆ ಬಾಗಿಲು ಒಡೆದು 3 ಲಕ್ಷ ನಗದು 4 ತೊಲೆ ಬಂಗಾರ ಕಳ್ಳತನವಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಆಳೂರ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಆಳೂರ ಗ್ರಾಮದ ಬಂಗಾರೆವ್ವ ಸಿದ್ದಪ್ಪ ಅವಜಿ ಎಂಬುವರ ಮನೆಯಲ್ಲಿ ನಸುಕಿನ ಜಾವದಲ್ಲಿ ಬಂಗಾರದ ಒಡುವೆ ಮತ್ತು ನಗದು ಕಳ್ಳತನ ಎಸಗಿ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂಡಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.