ಅಕ್ರಮ ಜಾನುವಾರು ಸಾಗಾಟ, ವಧೆ ತಡೆಗಟ್ಟಿ : ತಹಶಿಲ್ದಾರ ಮಂಜುಳಾ ನಾಯಿಕ
ಇಂಡಿ : ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮ ಜಾನುವಾರು ಸಾಗಾಟ ಹಾಗೂ ವಧೆಯನ್ನು ತಡೆಗಟ್ಟಬೇಕು ತಹಶೀಲ್ದಾರ ಮಂಜುಳಾ ನಾಯಿಕ ಸೂಚಿಸಿದರು.
ಗುರುವಾರ ತಾಲೂಕು ಆಡಳಿ ಸೌಧದ ತಹಶಿಲ್ದಾರ ಕಚೇರಿ ಸಭಾಂಗಣದಲ್ಲಿ ನಡೆದ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರಗಳ ಸಾಗಾಟ ಹಾಗೂ ವಧೆ ತಡೆಗಟ್ಟುವ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2020-21 ನೇ ಕರ್ನಾಟಕ ಅಧ್ಯಾದೇಶ ಸಂಖ್ಯೆ ಕರ್ನಾಟಕ ಜಾನುವಾರು ಹತ್ಯೆ ಪ್ರಭಂದಕ ಮತ್ತು ಸಂರಕ್ಷಣಾ ಅಧ್ಯಾದೇಶ ರನ್ವಯ ಎಲ್ಲಾ ವಯಸ್ಸಿನ ಆಕಳು, ಆಕಳು ಕರ, ಹೋರಿ, 13 ವರ್ಷದೊಳಗಿನ ಎಮ್ಮೆ ಕೋಣಗಳ ವಧೆ ಮಾಡುವಂತಿಲ್ಲ. ಈ ಕಾಯ್ದೆ ಉಲ್ಲಘನೆಯಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಅನಧಿಕೃತ ಜಾನುವಾರುಗಳ ಅಕ್ರಮ ಸಾಗಟು ತಡೆಗೆ ತಾಲ್ಲೂಕಿನ ಅಗರಖೇಡ ಹಾಗೂ ಇತರೆ ಕಡೆ ಚೆಕ್ ಪೋಸ್ಟಗಳನ್ನು ಸ್ಥಾಪಿಸಲಾಗಿದೆ. ಹಬ್ಬದ ಹಿಂದಿನ ಮೂರು ದಿನಗಳು ಅಧಿಕಾರಿಗಳು ಕಟ್ಟುನಿಟ್ಟಾಗಿ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಬೇಕು ಎಂದರು.
ಹಬ್ಬದ ಮುಂಚಿನ ಮೂರು ದಿನಗಳಲ್ಲಿ ಪುರಸಭೆ, ಪಶುಪಾಲನಾ ಇಲಾಖೆ, ಪೊಲೀಸ್ ಇಲಾಖೆಗಳ ಅಧಿಕಾರಿಗಳ ತಂಡ ರಚಿಸಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾನುವಾರುಗಳ ಅಕ್ರಮ ಸಾಗಣೆ ಹಾಗೂ ವಧೆಯನ್ನು ತಡೆಗಟ್ಟಲು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು
13 ವರ್ಷ ದಾಟಿದ ಎಮ್ಮೆ ಹಾಗೂ ಕೊಣಗಳುನ್ನು ವಧೆ ಮಾಡಬಹುದು. ಇದಕ್ಕೆ ಸಂಬಂಧಿಸಿದ ಪಶು ಇಲಾಖೆಯಿಂದ ನಿರಾಪೇಕ್ಷಣೆ ಪತ್ರ ಹಾಗೂ ವೈದ್ಯಕೀಯ ತಪಾಸಣೆ ಪತ್ರ ಹೊಂದಿರಬೇಕು ಎಂದು ತಿಳಿಸಿದರು. ಜಾನುವಾರುಗಳ ಸಾಗಾಟ ಮಾಡುವಾಗ , ಖರೀದಿಸುವಾಗ, ಮಾರಾಟ ಮಾಡುವ ಸಂದರ್ಭದಲ್ಲಿ ಜಾನುವಾರುಗಳಿಗೆ ಕಿವಿಯೋಲೆ ಇರುವುದು ಕಡ್ಡಾಯವಾಗಿರುತ್ತದೆ. ಹಾಗೂ ಸಾಗಾಣಿಕೆ ಸಂಬಂಧಪಟ್ಟಂತೆ ಸಂಭಂದಪಟ್ಟ ಅಧಿಕಾರಿ ಗಳಿಂದ ದೃಢೀಕರಣ ಪತ್ರ ತೆಗೆದುಕೊಂಡು ಸಾಗಾಣಿಕೆ ಮಾಡುವುದು ಕಡ್ಡಾಯವಾಗಿರುತ್ತದೆ ಎಂದರು.
ತಾಲ್ಲೂಕಿನ ಎಲ್ಲಾ ಜಾನುವಾರುಗಳ ಮಾಲೀಕರು ತಮ್ಮ ಜಾನುವಾರುಗಳಿಗೆ ಗುರುತಿನ ಸಂಖ್ಯೆ ಹೊಂದಿರುವ
ಕಿವಿಯೋಲೆ ಹಾಕುವಂತೆ ನಿರ್ದೇಶನ ನೀಡಬೇಕು. ಹಬ್ಬದ ಸಂದರ್ಭದಲ್ಲಿ ಮಾಂಸದ ತಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಪುರಸಭೆ, ಗ್ರಾಮ್ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಮಾಂಸ ಮಾರಾಟಗಾರರಿಗೆ ತಿಳಿವಳಿಕೆ ಮೂಡಿಸಬೇಕು, ಅನಧಿಕೃತವಾಗಿ ಜಾನುವಾರಗಳ ಸಾಗಾಟ ಮಾಡುವ ವಾಹನಗಳ ನೋಂದಣಿ ರದ್ದುಪಡಿಸುವ ಕುರಿತು ಕ್ರಮಕೈಗೊಳ್ಳಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಡಿ ವಾಯ್ ಎಸ್ ಪಿ ಎಚ್ ಎಸ್ ಜಗದೀಶ ಪುರಸಭೆ ಮುಖ್ಯ ಅಧಿಕಾರಿ ಮಂಹಾತೇಶ ಹಂಗರಗಿ, ಶಿರಸ್ತೆದಾರ ಎಸ್ ಆರ್ ಮುಜಗೊಂಡ ಪಶುಪಾಲನಾ ಮತ್ತು ಪಶವೈದ್ಯ ಸೇವಾ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.