ಇಂಡಿ : ಗೂಡ್ಸ್ ವಾಹನ ಹಾಗು ಬೈಕ್ ನಡುವೆ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಬಳಿ ಮಂಗಳವಾರ ನಡೆದಿದೆ. ಇನ್ನೂ ಮೃತಪಟ್ಟಿರುವ ವ್ಯಕ್ತಿಯ ಹೆಸರು ಹಾಗೂ ಮಾಹಿತಿ ತಿಳಿದುಬಂದಿಲ್ಲ. ಅಲ್ಲದೇ, ಇಂಡಿಯಿಂದ ವಿಜಯಪುರಕ್ಕೆ ಹೋಗುವ ರಸ್ತೆ ಈ ಅವಘಡ ಸಂಭವಿಸಿದೆ. ಮತ್ತೋರ್ವ ಹಿಂಬದಿಯ ಸವಾರ ಗಂಭೀರವಾಗಿ ರೂಪದಲ್ಲಿ ಗಾಯಗೊಂಡಿದ್ದಾನೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.