ಅಖಂಡ ಭಾರತ ನಿರ್ಮಾಣಕ್ಕೆ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ : ಮುಖಂಡ ಹುಚ್ಚಪ್ಪ
ಇಂಡಿಯಲ್ಲಿ ವಾಲ್ಮೀಕಿ ಮಹರ್ಷಿ ವೃತ್ ಉದ್ಘಾಟಿಸಿದ ಮುಖಂಡ ಹುಚ್ಚಪ್ಪ ತಳವಾರ
ಇಂಡಿ : ವಾಲ್ಮೀಕಿ ಮಹರ್ಷಿ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದ್ದು ಎಂದು ತಳವಾರ ಪರಿವಾರ ಸಮಾಜ ಸೇವಾ ಸಂಘದ ಪ.ಕಾರ್ಯದರ್ಶಿ ಹುಚ್ಚಪ್ಪ ತಳವಾರ ಹೇಳಿದರು.
ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ವೃತ್ ವನ್ನು ಯುವಕರು ಜೊತೆ ಸೇರಿಕೊಂಡು ಉದ್ಘಾಟನೆಗೊಳಿಸಿ ಮಾತಾನಾಡಿದರು. ಮಹರ್ಷಿ ವಾಲ್ಮೀಕಿ ಅವರು, ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗೆಯೇ ಮಾನವಿಯತೆಯೇ ಧರ್ಮ ಎಂಬದನ್ನು ಪ್ರತಿಪಾದಿಸಿದ್ದರು. ವಾಲ್ಮೀಕಿ ರಾಮಾಯಣ ನಿತ್ಯ ಕಥೆಯಾಗಿದೆಯೇ ಹೊರತು ಮಹಾಕಾವ್ಯವಲ್ಲ. ವಾಲ್ಮೀಕಿ ರಾಮಾಯಣ ಪ್ರತಿನಿತ್ಯ ನಡೆಯುವ ಘಟನೆಗಳಾಗಿದ್ದು, ಶಾಂತಿ, ಸಹಬಾಳ್ವೆ, ಅಹಿಂಸೆಯನ್ನು ಪ್ರತಿಪಾದಿಸಿದ್ದ ವಾಲ್ಮೀಕಿಯಿಂದ ಪಂಪ, ರನ್ನ, ಪೊನ್ನ, ಹರಿಹರ, ರಾಘವಾಂಕ ಮತ್ತಿತರ ಮಹಾನ್ ಕವಿಗಳು ಬೆಳಕಿಗೆ ಬರಲು ಕಾರಣವಾಯಿತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದರು.
ಇನ್ನೂ ಇದೆ ಸಂದರ್ಭದಲ್ಲಿ ಯುವ ನಾಯಕ ಸೋಮು ಜಮಾದಾರ ಮಾತಾನಾಡಿದ ಅವರು, ಮಹರ್ಷಿ ವಾಲ್ಮೀಕಿ ಅವರು ಒಂದು ಸಮುದಾಯಕ್ಕೆ ಸೀಮಿತ ವಲ್ಲ. ಇಡೀ ನಾಡಿಗೆ ವಿಶ್ವಕ್ಕೆ ಶಾಂತಿ ಸಹಬಾಳ್ವೆ ಪ್ರತಿಪಾದಿಸಿದವರು. ಇನ್ನೂ ಈ ತಳವಾರ ಸಮುದಾಯ ಶೈಕ್ಷಣಿಕವಾಗಿ ಅತೀ ಹೆಚ್ಚು ಒತ್ತು ಕೊಟ್ಟರೆ ಮಾತ್ರ ಸಮುದಾಯದಲ್ಲಿರುವ ಕತ್ತಲೆ ವ್ಯವಸ್ಥೆ ಬೆಳಕಿನಡಗೆ ಸಾಗಲು ಸಾಧ್ಯೆ ಎಂದು ಹೇಳಿದರು. ಈಗಿನ ಜಾಗತಿಕ ಮತ್ತು ತಂತ್ರಜ್ಞಾನ ಯುಗದಲ್ಲಿ ಯಾವುದೇ ಆಯುದ್ದಗಳು ನಡೆಯುವುದಿಲ್ಲ. ಆದರೆ ಕೇವಲ ನಡೆಯುವುದು ಶಿಕ್ಷಣ ಅಸ್ತ್ರ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೇವಣ್ಣ ಹತ್ತಳ್ಳಿ , ಶಿವಶರಣ ನಾಟೀಕಾರ್ , ಲಕ್ಷ್ಮಣ ನಾಟೀಕಾರ್, ಸಿದ್ರಾಮ ಜಮಾದಾರ, ಪಂಡಿತ್ ವಾಲಿಕಾರ, ಸುರೇಶ ಡ್ಯಾಬೇರಿ, ನಾಗು, ಸಿದ್ದು ಬಿರಾದಾರ್, ಭಾಗಪ್ಪ ಪೂಜಾರಿ, ವಿಠಲ್ ಅಂಗಡಿ, ಅಪ್ಪು ಖೇಡ್, ಅನಿಲ್ ಕೋಳಿ ಹಣಮಂತ ವಾಲಿಕಾರ, ಬಸು ವಾಲಿಕಾರ, ಪರಸು ಕೋಳಿ, ಸಂಜು ವಾಲಿಕಾರ ಇನ್ನೂ ಅನೇಕ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.