ಸಿಂಧನೂರು: 115 ಮೀಟರ್ ಎತ್ತರದ ಏಕಾಶಿಲಾ ಧ್ವಜ ಸ್ಥಂಭ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಶಾಸಕರಿಗೆ , ತಹಶಿಲ್ದಾರರಿಗೆ, ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರಿಗೆ ಸಿಂಧನೂರು ಗೆಳೆಯರ ಬಳಗದ (ಸಂಘ)ವತಿಯಿಂದ ಮನವಿ ಸಲ್ಲಿಸಲಾಯಿತು.
ನಗರದ ತಹಶಿಲ್ದಾರರ ಕಚೇರಿ ಆವರಣದಲ್ಲಿ ಸಿಂಧನೂರು ಗೆಳೆಯರ ಬಳಗದ ವತಿಯಿಂದ ಸಿಂಧನೂರು ತಾಲೂಕ ವಾಣಿಜ್ಯ ಹಾಗೂ ವ್ಯಾಪಾರ ಮತ್ತು ಇತರೆ ಕ್ಷೇತ್ರದಲ್ಲಿ ಮುಂದುವರೆಯುತ್ತಿರುವ ತಾಲೂಕಾಗಿದ್ದು, ಅಲ್ಲದೇ ಅಕ್ಕ ಪಕ್ಕದ ಜಿಲ್ಲೆಗಳಾದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಈಗಾಗಲೇ ಅತಿ ಎತ್ತರದ ಏಕಾಶಿಲಾ ಧ್ವಜ ಸ್ಥಂಭವನ್ನು ನಿರ್ಮಾಣ ಮಾಡಿರುವುದು ಸಂತೋಷದ ಸಂಗತಿಯಾಗಿದೆ. ಅದರಂತೆಯೇ ನಗರದಲ್ಲಿಯೂ ಕೂಡಾ ಏಕಾಶಿಲಾ ಧ್ವಜಸ್ಥಂಭವನ್ನು ನಿರ್ಮಾಣ ಮಾಡಲು ಸಿಂಧನೂರು ತಾಲೂಕಿನ ಗೆಳೆಯರ ಬಳಗ ಹಾಗೂ ಸಾರ್ವನಿಕರ ಇಚ್ಛೆಯಾಗಿದೆ. ಇದರ ಪ್ರಕಾರ ನಗರದಲ್ಲಿ ಗಾಂಧಿ ವೃತ್ತ, ತಾಲೂಕ ಕ್ರೀಡಾಂಗಣ, ಮಿನಿ ವಿಧಾನ ಸೌಧ, ಅಥವಾ ನೂತನವಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ನಿಲ್ದಾಣದ ಯಾವುದಾದರೂ ಒಂದು ಸ್ಥಳದಲ್ಲಿ 115 ಮೀಟರ್ ಎತ್ತರದ ಏಕಾಶಿಲಾ ಧ್ವಜ ಸ್ಥಂಭವನ್ನು ನಿರ್ಮಾಣ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಂಧನೂರು ಗೆಳೆಯರ ಬಳಗದ ಸಂಘ ಅಧ್ಯಕ್ಷ ಸೈಯ್ಯದ್ ಬಂದೇನವಾಜ್, ಉಪಾಧ್ಯಕ್ಷ ಸದ್ದಾಂ ಖಾನ್ ಸೌದಾಗರ, ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್, ಕಾನೂನು ಸಲಹೆಗಾರ ಜೆ.ರಾಯಪ್ಪ ವಕೀಲರು, ಸಂಚಾಲಕ ವೀರೇಂದ್ರ ಶೆಟ್ಟಿ, ಸಹಕಾರ್ಯದರ್ಶಿ ವೀರೇಶ್ ಕಂದಕೊರ, ಸಾಮಾಜಿಕ ಜಾಲತಾಣ ಮುಖ್ಯಸ್ಥ ಸುರಂಜನ್ ಕುಮಾರ ಬೈರಾಗಿ, ಹನುಮಂತ ಸುಕಾಲಪೇಟೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮುಖಂಡರು ಉಪಸ್ಥಿತರಿದ್ದರು.